Thursday, July 9, 2009

ತುಂತುರು...!

ಹೊರಬಂದೆ ನಾ... ಚಿಲಿಪಿಲಿ ನಾದ ಕೇಳಿ!
ತಂಪು ತಂಗಾಳಿಯ ಈ ಸುಂದರ ಮುಸ್ಸಂಜೆಯಲಿ...
ಗೋಧೂಳಿಯ ಈ ಸಮಯ... ಕೂಗಿ ಕರೆದಿದೆ ಧರೆಯ...
ಸ್ಪರ್ಶಿಸಲು... ಸವಿಯಲು...ನಲಿಯಲು...ಕುಣಿಯಲು...


ಮೈಮರೆಸುವ... ಆ ಮತ್ತಿನ ಸುವಾಸನೆ...
ತಲೆ ಕೆಡಿಸುವ... ನೆನಪುಗಳ ಚಿಂತೆ!
ಮತ್ತೆ ಕಾಡುವ ಆ ನೋಟಗಳ ದೃಶ್ಯ...
ಕಪ್ಪು ಕಾರ್ಮೋಡದ ಈ ನನ್ನ ಸಂಜೆಯ ಆಟ...


ಕನಸುಗಳು ಹಲವು... ಆಸೆಗಳು ಸಾವಿರಾರು!
ಮಿತಿಯಿರದ ಬಯಕೆಗೆ, ಒಂಟಿತನದ ಅದೃಷ್ಟ...
ಜೊತೆ ಯಾರೆಂಬ ಕಾತುರತೆಯ ಕೇಳಿ, ಕೂಗಿದೆ ಒಲವು...
ಜಾರಿದೆ ಮನ ಈ ಸಿಹಿಗನಸಿನ ಪ್ರೀತಿಯಲಿ!


ಮನವು ಹಸಿಯಾಗುವ, ಪ್ರೀತಿ ಹೂವಾಗುವ ಸೊಬಗ...
ಹಂಚಿಕೊಳ್ಳಲು...ಕರೆದೇ ನಾ ನಿನ್ನ ಭುವಿಗೆ...
ಕನಸು ನನಸಾಗಿಸಿ... ಮೈಮರೆಸಿ ನನ್ನ...
ನನಗೇ ತಿಳಿಯದಂತೆ ನಿನ್ನ ತುಂತುರಿಗೆ ವಶವಾದೆ!

ಹೊರಬಂದೆ ನಾ... ಈ ತುಂತುರು ಮಳೆಯಲ್ಲಿ!

ಶ್ರೀ...

6 comments:

sunaath said...

ತುಂತುರು ಮಳೆ ಹೊಮ್ಮಿಸುವ ಭಾವವೂ ಸಹ ತುಂತುರುವಿನಲ್ಲಿಯೇ ಹೊರಬಂದಿದೆ!

Srik said...

ಸುನಾಥ್... ಈ ನನ್ನ ತುಂತುರು ಹನಿಯನ್ನು ಓದಿದಕ್ಕೆ ಧನ್ಯವಾದಗಳು.

T S said...

Oh..!! Ondonde sundara padagala kudittu bareda kannada kavithe..!! Good. One doubt

Ellinda Horabande..??

Raghu said...

ನಿನ್ನ ಭಾವನೆಗಳನ್ನು ಹೊರಹಾಕಲು ಪುಷ್ಟಿ ನೀಡಿದ ಆ 'ತುಂತುರು' ಹನಿಗಳಿಗೆ ನನ್ನ ವಂದನೆ.

Srik said...

ಟಿ. ಎಸ್ ರವರೆ...ನನ್ನ ಇಷ್ಟು ದಿನದ ಲೇಖನಗಳು / ಕವನಗಳು ಆಂಗ್ಲ ಭಾಷೆಯಲ್ಲಿ ಇದ್ದಿದ್ದರಿಂದ ನಿಮಗೆ ನನ್ನ ಕನ್ನಡದ ಪರಿಚಯ ಇಲ್ಲದಿರಬಹುದು. ಇಷ್ಟು ದಿನ ನಾನು ಕನ್ನಡವನ್ನು ಕೂಡಿಟ್ಟು ಬರೆದದ್ದೇನೋ ನಿಜ.

ನಾನು ಹೊರಬಂದದ್ದು ತಲೆ ಕೆಡಿಸುವ ದಿನನಿತ್ಯದ ಕೆಲಸದ ಬದುಕಿನಿಂದ! ಧನ್ಯವಾದಗಳು!

Sudhi said...

ತುಂತುರುನಿಂದ ಪ್ರಾರಂಭವಾಗಿರುವ ನಿನ್ನ ಈ ಕನ್ನಡ ಕವನಗಳ ಮಳೆ ಮುಂಗಾರು ಮಳೆಯಂತೆ ಭೋರ್ಗರೆಯಲಿ ಎಂದು ಹಾರೈಸುವ ನಿನ್ನ ಹಿತೈಷಿ.
- ಸುಧಿ