Tuesday, October 27, 2009

ಮಾತು ಒಗಟಾದಾಗ...

ಮಾತು ಒಗಟಾದಾಗ
ಮೌನ ಮಾತಾಗಿ,
ಮೌನದ ಮಾತಲ್ಲೇ
ಜೀವ ಹಗುರಾಗಿ,
ಮನದ ಕಾರ್ಮೋಡ
ಕರಗಿ ನೀರಾಗಿ,
ಕಂಡ ಕನಸುಗಳು
ಹಾಗೆಯೇ ನನಸಾಗಿ,
ನನ್ನಾಸೆಯ ಜೀವಕೆ
ಕತ್ತಲೆಯ ಬೆಳಕಾಗಿ,
ಬೆಳಕಿನ ಬಳುಕಿಗೆ
ಸ್ಪರ್ಶದ ಹಿತವಾಗಿ,
ಹಿತವಾದ ಮನಸ್ಸಿಗೆ
ಮೃದುವಾದ ಕವಚವಾಗಿ,
ನೊಂದ ಕ್ಷಣಗಳು
ಮರೆತು ಹಾಡಾಗಿ,
ಹಾಡಿನ ರಾಗಕೆ
ಸ್ವರವು ನಾನಾಗಿ,
ನನ್ನೆದೆಯ ಮಿಡಿತಕೆ
ಬಡಿತ ನೀನಾಗಿ,
ಪ್ರೀತಿಯ ಚಿಲುಮೆಗೆ
ಹೃದಯ ಒಂದಾಗಿ,
ನಲಿವಿನ ಸಮಯ
ಮಿತಿಯಿಂದ ಅತಿಯಾಗಿ,
ಅರಿವಿಲ್ಲದೆ, ಪ್ರೀತಿ...
ಪ್ರಶ್ನೆಯಾಗಿ,
ಉತ್ತರವ ಹುಡುಕುತ
ಸಂಭಂದಗಳಿಗೆ ಬಲಿಯಾಗಿ,
ಬಲಿಯಾದ ಮನಕೆ
ಒಂಟಿತನ ಜೊತೆಯಾಗಿ,
ನಿಂತ ಸಮಯಕೆ
ಮನವು ವಶವಾಗಿ,
ಮಾತು ಮೌನವಾಗಿ
ಮತ್ತೇ...ಒಗಟೇ ನನ್ನ ಮಾತಾಗಿ !!

ಶ್ರೀ

12 comments:

Anu said...

Awesome sri.. its too good.. great going! really a good one.. its feels as if written by a Veteran poet

Raghu said...

Wow! It is really nice. Keep going

Hari said...

Excellent and Mesmerizing .....Read it without a blink...thanks for this......

BABA said...

pls tell me..when do you find time to write all these...its really amazing....

Shubhananda said...

ತುಂಬಾ ಒಳ್ಳೆಯ ಪ್ರಯತ್ನ... ಕನ್ನಡದಲ್ಲಿ ಇದೀರೀತಿ ಇನ್ನು ಒಳ್ಳೆಯ ಮತ್ತು ಹೆಚ್ಚು ಬರಹಗಳನ್ನು ಬರಲಿ... :)

Vaishnavi said...

I was a terrible Kannada student in school. And my Kannada is not very fluent. I didn't understand the entire poem, only bits and pieces and it sounds really good. I mean it!
I admire all those who can write poetry, it is a different ballgame altogether.
And like BABA asks, where do you find the time to write all this???!!

T S said...

" Maatu Ogataagi.. Manassu barahada Daari hidida haagide..!!
Super..!!
Kannadada Kanda agbitte srikanth..!!

November hatra barthide.. innonderadu maathu, Mouna, miditha, hidithagala naduve matteradu kavana moodali..!!

Manjula said...

Simply Awesome !!!

Srik said...

Thank you all for the encouragement! :)

Sudhi said...

ಹರಿಯಲಿ ಹೀಗೆ ಕನ್ನಡದ ಕವನ
ಆಗಲಿ ಕನ್ನಡದ ಮಣ್ಣು ಪಾವನ

SuZ said...

Hey sakkath aagi ide...really good

Srik said...

Thanks Suz :)