ಮಾತನಾಡಿದೆ ನಾನು
ನನ್ನ ಮೊದಲ ಮಾತ
ನನ್ನ ಮನಸಿನ ಮಾತ...
ಹೆದರಿಕೆಯ ಢವ ಢವದಿ
ಪದ ಪದವ ಜೋಡಿಸುತ
ಹೇಳಿದ ನನ್ನಾಸೆಯ ಮಾತ...
ಮಾತು ಮಾತಲ್ಲೇ
ಮನದ ಮೌನ ರಾಗವ
ರಚಿಸಿದ ಆ ಮಾತ...
ಕುತೂಹಲದಿ ಕಿವಿಯಿಂದ
ಕಿವಿಗೆ ಕೇಳಿಸಿದ ನನ್ನ
ಭಾವನೆಗಳ ಮಾತ...
ಮೈಮರೆತು ನನ್ನನ್ನು
ನಾನು ಸಂಪೂರ್ಣವಾಗಿ
ಒಪ್ಪಿಸಿದ ಮಾತ...
ತನ್ನಷ್ಟಕ್ಕೆ ತಾನೇ
ಹೊರಬಂದ ಆ ನನ್ನ
ನಿಜವಾದ ಮಾತ...
ಮಾತು ಮಾತಾಗಿ
ಮಾತು ಬೆಳದು, ಕೇಳಿದೆ ನಾ
ಇನ್ನೊಂದು ಮಾತ...
ಆ ಮಾತ ಕೇಳಿ ಮೈಮರೆಯುತ
ಭಾವದೊಳಗೆ ಭಂದಿಯಾಗುತಾ
ನಾ ಮನಸೋತ ಮಾತ...
ಮುಂದೇನಾಗುವುದೋ
ಎಂದು ಎದುರು ನೋಡುತಾ
ಹೇಳಿದ ಮಾತ...
ಮಾತು ಮಾತಿಗೆ
ಭಾವನೆಗಳ ಸಮ್ಮಿಲನವಾದ
ಸಿಹಿಯಾದ ಮಾತ...
ಹೊಸ ಮಾತಾದರು
ಬೇಗ ಸಮೀಪವಾದ
ನೇರ ಮಾತ...
ಅಸಾಧ್ಯ ಎಂದುಕೊಂಡ
ಆಸೆಗಳಿಗೆ ಜೀವಕೊಟ್ಟ
ಆ ಮನಸ್ಸಿನ ಮಾತು...
ಕ್ಷಣಗಳಲಿ, ಮುಗುಳುನಗೆ ತಂದಿತು ಆ ಮಾತು...
6 comments:
ಯಾವುದು ಆ ಮಾತು? ಯಾರಿಗೆ ಹೇಳಿದ ಮಾತು?
It is nice.
enu aa matu? :-)
Nice one.....
very very nice :)
My command of Kannada is so rusty that I am afraid to say something without fully grasping the thought contained in a nice poem
You must forgive me.
In terms of literary clarity it is very nice indeed.
Nice on Srik..
Hope you have told something to somebody. All the best.
ಮಾತುಗಳು ಬರಿ ಮಾತಾಗಿ ಉಳಿಯದೆ ,ನಿನ್ನ ಬಾವನೆಗಳಿಗೆ ಸರಿಯಾದ ಅರ್ಥ ಸಿಗಲಿ ಎಂದು ಹಾರೈಸುವೆ ...
ಹರಿ
Post a Comment