ಮುದ್ದಿನ ಮೂಗಿನ
ಮೂಗುತಿಯ ನೋಡಿ
ಕೆನ್ನೆಯ ಗುಳಿಯ
ನಗುವನು ನೋಡಿ
ಹೊಳೆಯುವ ಕಣ್ಣಿನ
ಸಿಹಿನೋಟವ ನೋಡಿ
ಮೈಮರೆತೆ ನಾ ನಿನ್ನಾಟವ ನೋಡಿ...
ತುಂಟ ತುಟಿಯ
ಮಾತನು ಕೇಳಿ
ಮುಗ್ಧ ಮನಸ್ಸಿನ
ಆಸೆಯ ಕೇಳಿ
ಕಣ್ಣಿನ ರೆಪ್ಪೆಯ
ಕನಸನು ಕೇಳಿ
ಬಾಲ್ಯದ ನೆನಪಾಯಿತು ನನಗೆ ಕೇಳಿ ಕೇಳಿ...
ನೀ ಆಡಿದ ಮಾತುಗಳು
ನೀ ಮಾಡಿದ ಚೇಷ್ಟೆಗಳು
ನೀ ಆಟವಾಡಿದ ದೃಶ್ಯಗಳು
ಅಣ್ಣನೊಂದಿಗೆ ಕಿತ್ತಾಡಿದ ಕ್ಷಣಗಳು
ತಾತನಿಗೆ ಕೊಟ್ಟ ಕಾಟ
ಅಪ್ಪ-ಅಮ್ಮನಿಂದ ತಪ್ಪಿಸಿಕೊಂಡ ಒಡೆತಗಳು
ಕರೆದಿದೆ ನನ್ನನು ನನ್ನ ಬಾಲ್ಯದ ಕನಸುಗಳು...
ನಿನಗೆ ಕೂಪ ಬಂದಾಗ
ಮುಗುಳುನಗೆ ಮೂಡಿದಾಗ
ಕಣ್ಮುಚ್ಚಿ ನಿದ್ದೆ ಮಾಡಿದಾಗ
ಬಾಯಿತೆಗೆದು ಆಕಳಿಸಿದಾಗ
ಸಪ್ಪೆ ಮುಖವ ತೋರಿದಾಗ
ಬೇಡ ಹೋಗ್! ಎಂದು ಮೂತಿ ತಿರುವಿದಾಗ
ನನಗೆ ಕಂಡಿದ್ದು ನಿನ್ನ ಆ ಮೂಗುತಿ....
ನಿನ್ನ ಭಾವನೆಗಳಿಗೆ, ನಿನ್ನ ಕನಸುಗಳಿಗೆ
ನಿನ್ನ ಚೆಲುವಿಗೆ ಅರ್ಥ ಕೊಡುವ ಆ ಸುಂದರ ಮೂಗುತಿ!
ಶ್ರೀ
8 comments:
Personification of innocence - reminds us of our childhood days which often visits us in various forms ...sometimes like SriRaksha ,her ring,her smiles .....
To sum up ..this poem and her photos are "Past Perfect".
ಶ್ರೀ,
ನಿಮ್ಮ ಕನ್ನಡ ಕವನ ಓದಲು ಸಂತೋಷವಾಗುತ್ತಿದೆ. ಎಳೆತನದ ನೆನಪನ್ನು ಮಧುರವಾಗಿ ಚಿತ್ರಿಸಿದ್ದೀರಿ.
ಸುನಾಥ್, ಈ ನನ್ನ ಪುಟ್ಟ ಕವನವನ್ನು ಓದಿದ್ದಕ್ಕೆ ಧನ್ಯವಾದಗಳು. :)
Nice to get back to childhood and its thoughts!Nicely depicted through a poem.
Nice photography too.Had forgotten to add.
ಸುಮಧುರ ಭಾವನೆಗಳಿಂದ ತುಂಬಿದ ಸುಂದರ ಕವನ !
hey Srik,
really nice poem. I can't even think of observing so much in a person, the way you have described the activities of the kid. hats-off dude!
Post a Comment