ಆ ದಿನಗಳ ನೆನಪು
ನಾಳೆಗೆ ಕಾಣಿಸದೆ
ನೆನ್ನೆಗಳಾಗಿ ಉಳಿದು
ನನ್ನ ಈ ದಿನಗಳ
ಕವಲೊಡೆದ ದಾರಿಯಲ್ಲಿ
ಒಂಟಿಯಾಗಿ ನಿಲ್ಲಿಸಿ
ಕವಲಿಗೆ ಹಿಂತಿರುಗದೆ,
ಮುನ್ನುಗ್ಗದೆ, ಹೆದರಿ
ಯಾವ ಪ್ರಶ್ನೆಗಳಿಗೂ
ಉತ್ತರವಿಲ್ಲದೆ ಕುಳಿತೆ ನಾ!
ಹೃದಯದ ಆಳದಲ್ಲಿ
ಅವಿತು ಕುಳಿತ ಭರವಸೆಯ
ಮಾತು, ಕಿವಿಯಲ್ಲಿ ಹೊರಬಂದು
ಜೀವ ಹಿಡಿದು ಸಮಯವ
ನೋಡುತ್ತಾ, ಯಾವ ದಾರಿಯೂ
ಲೆಕ್ಕಿಸದೆ ಈ ಕವಲಿನ
ಬರಗಾಲವ ಹೆದರಿಸುತ
ಹಿಂಜರಿಯದೆ ಆ ನಂಬಿಕೆಯ
ಉಳಿಸುವ ಕನಸು ಕಾಣುತ್ತಾ
ಸಮಯಕ್ಕೆ ಕಾವಲಾದೆ ನಾ!
ನಂಬಿದ ನನ್ನ ಮನಕೆ
ನೆಮ್ಮದಿಯ ನೀಡಲು
ಕವಲೊಡೆದ ದಾರಿಗಳ
ಒಂದು ಮಾಡಲು
ಒಂದೇ ದಾರಿಯಲ್ಲಿ
ಇಬ್ಬರೂ ನಡೆವಂತೆ
ತುಂಬು ಪ್ರೀತಿಯಲಿ
ಬಯಸಿ ಬಾಳುವಂತೆ
ನಿಂತ ಸಮಯವ ಮರೆಸಲು
ಪುನಃ ಬಾಳಲಿ ಬಂದೆ ನೀ!
ನೀ ಬಂದ ಹಾದಿಯ
ಚುಂಬಿಸುತ,ನನ್ನ ಈ
ಇಷ್ಟು ದಿನದ ಮೌನವ
ನಿನಗೆ ಹಂಚಿಕೊಳ್ಳುವ
ನಿನ್ನ ನೋಟದಲ್ಲಿ ನನ್ನ ದೃಷ್ಟಿಯ
ಸೇರಿಸುತ ನನ್ನಾಸೆಯ
ಹೇಳಬೇಕೆನ್ಸುವಷ್ಟರಲ್ಲಿ
ನೀ ಮಾತನಾಡಿದೆ, ನೀ
ನನಗಲ್ಲವೆಂದು ಹೇಳಿ,
ಮತ್ತೆ ಕವಲು ದಾರಿಯಾದೆ!
ಇಬ್ಬರೂ ನಡೆವಂತೆ
ತುಂಬು ಪ್ರೀತಿಯಲಿ
ಬಯಸಿ ಬಾಳುವಂತೆ
ನಿಂತ ಸಮಯವ ಮರೆಸಲು
ಪುನಃ ಬಾಳಲಿ ಬಂದೆ ನೀ!
ನೀ ಬಂದ ಹಾದಿಯ
ಚುಂಬಿಸುತ,ನನ್ನ ಈ
ಇಷ್ಟು ದಿನದ ಮೌನವ
ನಿನಗೆ ಹಂಚಿಕೊಳ್ಳುವ
ನಿನ್ನ ನೋಟದಲ್ಲಿ ನನ್ನ ದೃಷ್ಟಿಯ
ಸೇರಿಸುತ ನನ್ನಾಸೆಯ
ಹೇಳಬೇಕೆನ್ಸುವಷ್ಟರಲ್ಲಿ
ನೀ ಮಾತನಾಡಿದೆ, ನೀ
ನನಗಲ್ಲವೆಂದು ಹೇಳಿ,
ಮತ್ತೆ ಕವಲು ದಾರಿಯಾದೆ!
ಶ್ರೀ
2 comments:
ಶೀರ್ಷಿಕೆ ನೋಡಿದಾಕ್ಷಣ, "ಕವಲು" ಕಾದಂಬರಿ ಬಗ್ಗೆ ಅಂಥ ತಿಳ್ಕೊಂಡೆ
ಆದರೆ ಇದೇನೋ ಬೇರೆ ಕವಲೋಡೆದಿರೋ ಹಾಗಿದೆ!
i got link from book reviews and found kannada word, without any second thought i dropped....
nice one and ended touchingly...
Post a Comment