Sunday, January 9, 2011

ಹಾಡಿನ ತುದಿಯ ಹುಡುಕಿ

ಬೆಳಗಿನ ಕಿರಣವ ನೋಡಿ
ನೋಡಿದ ದೃಶ್ಯವ ಸವಿದು 
ಸವಿದ ಕ್ಷಣಕೆ ಸೋತು 
ಸೋತ ಸಮಯವ ಮರೆತು
ಮರೆತ ಹೃದಯವು ಹಾಡಿ
ಹಾಡಿನ ತುದಿಯ ಹುಡುಕಿ
ಹುಡುಕಿದ ರಾಗಕೆ ಮೈಮರೆತು 
ಮೈಮರೆತು ಹಾಡಿದ ಪದಕೆ 
ಗೆಜ್ಜೆಯ ನಾದದಿ ಕುಣಿದು 
ಕುಣಿದು ಜಿಗಿದ ಮನಸ್ಸು 
ಮನಸ್ಸ ಮಾತ ಕೇಳಿ 
ಕೇಳಿ ಹೇಳಿದ ಕನಸ  
ಕನಸಿನ ಬಣ್ಣದ ನೆನಪು 
ನೆನಪಿನ ಆಳವ ತಿಳಿದು 
ತಿಳಿದ ಸಮಯವು ಮೀರಿ 
ಮೀರಿದ ಹೊತ್ತಿಗೆ ಸಂಜೆಯಾಗಿ 
ಸಂಜೆಯ ಸೂರ್ಯನು ಕೆಂಪಾಗಿ 
ಕೆಂಪು ಸಂಜೆಗೆ ಪಕ್ಷಿಯಾಗಿ 
ಪಕ್ಷಿಗಳು ಒಟ್ಟಾಗಿ ಹಾರುವ 
ಹಾರಾಡುವ ಮನವು ಕತ್ತಲಾಗಿ 
ಕತ್ತಲಾದ ನಿಮಿಷಕ್ಕೆ ಮೌನವಾದೆ...

ಶ್ರೀ 

2 comments:

sunaath said...

ಈ ಸರಪಳಿ ಕವನ ಬಲು ಸೊಗಸಾಗಿದೆ.

Raghu said...

Wow! wow! very nice