ಕತ್ತಲು ಕವಿದಿದೆನಾ ನಡೆದುಬಂದ ದಾರಿ
ಕಾಣದಾಗಿದೆ
ಕಾರ್ಮೋಡ ಮುಸುಕಿದೆ
ಮುತ್ತಿನ ಮಳೆ ಹನಿಯು
ಕಲ್ಲಾಗಿ ಧುಮುಕುತಿದೆ
ನೆನಪು ಕಾಡುತಿದೆ
ಮನದ ಭಯಕ್ಕೆ
ಹೃದಯ ಕಲ್ಲಾಗಿದೆ
ಪ್ರೀತಿ ಕೂಗುತಿದೆ
ಕೂಗಿನ ನೋವಿಗೆ
ಸಮಯ ಮುಳ್ಳಾಗಿದೆ
ಆಸೆ ನೂರಾಗಿದೆ
ಎದೆಯಾಳದ ಮಾತು
ಮೌನವಾಗಿದೆ
ಸ್ವರವು ಹಿಂಗುತಿದೆ
ಕಣ್ಣಿನ ಹನಿಯು
ತುಂತುರಿಗೆ ಮಿಲನವಾಗಿದೆ
ದಿನವು ಹೊಸದಾಗಿದೆ
ಕತ್ತಲೆಯಿಂದ ಬೆಳಕಿನತ್ತ
ಜೀವ ಕರೆಯುತಿದೆ
ಶ್ರೀ