Showing posts with label ಉತ್ತರ. Show all posts
Showing posts with label ಉತ್ತರ. Show all posts

Sunday, January 17, 2010

ಒಗಟಿನ ತುದಿಯಲ್ಲಿ

ನಾನು ನಾನಾಗುವ ಆಸೆಯ
ಹಂಚಿಕೊಳ್ಳುವ ಭಾವವ
ಹುಡುಕುತ ಹೋದ ನಾ,
ಸಿಕ್ಕಿಬಿದ್ದೆ ಒಂದು ಒಗಟಿನಲ್ಲಿ!

ನನ್ನಾಸೆಯ ಮನಕೆ
ನನ್ನೆದೆಯ ಕೋರಿಕೆಗೆ
ನನಗಿರುವ ನೆನಪಿನ
ತಿರುಗುಬಾಣದ ಒಗಟು!

ಅರ್ಥವಾಗದ ಜೀವಕೆ
ಬಲಿಯಾದ ಕ್ಷಣಗಳು
ಚಿಂತಿಸುವ ಪ್ರಸಂಗಗಳು
ಕೂಡಿಟ್ಟು ತಂದ ಈ ಒಗಟು!

ಒಂದರಮೇಲೆ ಒಂದೆನ್ನುತ
ದಿನ ದಿನವೂ ಮಿತಿಮೀರುತ
ಅದರದೇ ವೇಗದೊಳು
ಮುಂದೆ ಬರುವ ಆ ಒಗಟು!

ಬಿಡಿಸಲು ಹೋದೆ ನಾ
ಆ ಬಿಡಿಸಲಾಗದ ಒಗಟ
ಅರಿಯಲು ಹೋದೆ ನಾ
ಆ ಅರ್ಥವಾಗದ ಒಗಟ!

ಹೃದಯದ ಭಾರವ
ಕಣ್ಣಿನ ಪ್ರತಿ ಹನಿಯ
ಬಯಸಿದ ಅಕ್ಕರೆಯ
ಹಿಡಿದಿರುವ ಒಗಟ!

ಯೆದೆಬಡಿತವ ಹೆಚ್ಚು ಮಾಡುವ
ಕನಸುಗಳಿಗೆ ಕಡಿವಾಣ ಹಾಕುವ
ಜೀವನವನ್ನು ಪರಿಚಯಿಸುವ
ಒಗಟಿನ ಪ್ರಶ್ನೆಗಳು!

ಕಂಡೆ ನಾ ನೋವನ್ನು
ದೂರದ ಆ ಬೆಳಕನ್ನು
ಕಾಣದ ಪ್ರೀತಿಯನ್ನು
ಮುಚ್ಚಿಟ್ಟ ಆ ಒಗಟಿನಲ್ಲಿ!

ಇರುವೆ ನಾ ಒಗಟಿನ ತುದಿಯಲ್ಲಿ... ಉತ್ತರವಿಲ್ಲದೇ, ಪ್ರಶ್ನೆಯಲಿ!

ಶ್ರೀ