Showing posts with label ನೆನಪು. Show all posts
Showing posts with label ನೆನಪು. Show all posts

Thursday, April 29, 2010

ಕಾಣದ ದಾರಿ

ಸುಂದರ ಸಮಯದ
ಸವಿ ನೆನಪುಗಳ 
ಆ ಮಧುರ ದಿನಗಳು...

ತುಂತುರು ಹನಿಯ ಸ್ಪರ್ಶಿಸಿ 
ಕೈ ಹಿಡಿದು ನಡೆದ ಕ್ಷಣಗಳ 
ಆ ಮರೆಯಲಾಗದ ಪ್ರಸಂಗಗಳು...

ಪ್ರತಿ ಕನಸ್ಸಿಗು ಹೆಸರಿಡುತ್ತಾ
ಪ್ರತಿ ಉಸಿರಿಗೂ ಕಿವಿಕೊಟ್ಟ 
ಆ ಮಾಯಾಲೋಕದ ದೃಶ್ಯಗಳು...

ನೀರಿನಮೇಲೆ ಹೆಜ್ಜೆಯಿಡುತ್ತಾ
ತಂಗಾಳಿಯಲ್ಲಿ ತೇಲುತ್ತಾ 
ಮೈಮರೆತ ಆ ವಿಸ್ಮಯಗಳು...

ನೂರು ಜನ್ಮ ಬಂದರೂ
ನೀನೆ ನನ್ನ ಹಾಡಾಗಬೇಕೆಂದು
ಕೋರಿದ ಆಸೆಗಳು...

ಒಂದರಮೇಲೊಂದು ಬಯಕೆಯ 
ಒಂದೊಂದಾಗಿ ತೀರಿಸಲು 
ಕೊಟ್ಟ ಮಾತುಗಳು...

ಬಣ್ಣಬಣ್ಣದ ದೃಶ್ಯವ ನೋಡಿ 
ಬಣ್ಣದ ಮುಖವಾಡ ಹಾಕಿ 
ನಗಾಡಿದ ಆ ಕೆನ್ನೆಯ ಗುಳಿಗಳು...

ಅಂದಿನ ಆ ಸಿಹಿ ನೆನಪುಗಳಲ್ಲೇ 
ಹೊಸತಿರುವು ಕಂಡ ಈ ಮನಸ್ಸಿನ 
ಇಂದಿನ ಪುಟಗಳು...

ಶ್ರೀ 








Sunday, December 6, 2009

ನೆನಪಾದ ಮಾತು




ಒಂದು ಕ್ಷಣದ ಅನುಭವ
ನಾನು ತಿರುಗಿ ನೋಡದ ಸಮಯದ
ಮಾತನ್ನು ಮತ್ತೆ ನೆನಪು ಮಾಡಲು...
ಅವಳ ಹಾಡಿಗೆ, ಅವಳ ನುಡಿಗೆ
ಅವಳ ರಾಗಕೆ ನಾ ಸೋತುಹೋದ
ಸೋತು ಮೈಮರೆತ ಆ ದಿನಗಳು...
ಜೊತೆ ಜೊತೆಯಲಿ ಓಡಾಡಿದ
ಹಸಿರಿನ ದಾರಿ, ಕೈ ಕೈ ಹಿಡಿದು
ಸ್ವರ್ಗದಲ್ಲಿ ನಡೆದ ಆ ದೃಶ್ಯಗಳು...
ಬಯಕೆ ಹಸಿವಾಗಿ, ಹಸಿವು ಅತಿಯಾಗಿ,
ವಿಪರೀತತೆ ಮಿಲನವಾಗಿ, ಕ್ಷಣಗಳು
ಗಂಟೆಗಲಾದ ರಸಿಕ ಪ್ರಸಂಗಗಳು...
ಪ್ರೀತಿಯ ಮಾತುಗಳು, ಸುಂದರ ಸದೃಷ್ಯಗಳು
ಬಿಡುವಿಲ್ಲದ ಮೋಹಕೆ, ಬಲಿಯಾದ ಜೀವಗಳ
ಹುಡುಗಾಟದ ಹುಡುಕಾಟದ ಸಮಯಗಳು...
ಸದಾ ಜೊತೆ ಇರಬೇಕೆಂದು,
ಎರಡು ಹೃದಯಗಳು ಒಂದಾಗಬೇಕೆಂದು,
ಪರಿತಪಿಸಿದ ಆ ಮನಮೋಹಕ ದಿನಗಳು...
ಮಳೆಯಲ್ಲಿ, ಜೊತೆಯಲ್ಲಿ, ನಡೆಯುತಾ,
ಮಳೆಯ ಹಾಡಿಗೆ ಹೆಜ್ಜೆ ಗೆಜ್ಜೆಯಗುತಾ,
ನೆನೆದು ನೆನೆದು, ನೆನೆಯುತ್ತಾ ಕಳೆದು...
ಮುತ್ತುಗಳು, ಮಾತುಗಳು,
ಕನಸುಗಳು, ಆಸೆಗಳು,
ನಮ್ಮಿಬ್ಬರ ಸಂಗಾತಿಗಳು...
ನಮ್ಮ ಮಿಲನಕೆ, ಚಿಲಿಪಿಲಿ
ಹಾಡಿನ ವಾದ್ಯಗಳು, ಹಸಿರು
ತೋರಣದ ಸುಂದರ ವಿಚಾರಗಳು...
ಮಾತಿಗಾಗಿ ಮಾತು, ಹಸಿವಿಗಾಗಿ
ಮಾತು, ನೋವಿಗಾಗಿ ಮಾತು, ನಲಿವಿಗಾಗಿಮಾತು,
ಮಾತು-ಮಾತಿಗೆ ಕೊನೆಯಾದ ಮಾತು...
ಕ್ಷಣಗಳು ನಿಂತುಹೋಗಿ, ಕತ್ತಲಲ್ಲಿ ಕಪ್ಪಾಗಿ,
ಕ್ಷಣಗಳು ಹಾರಿ, ಕಾಣದ ದೂರದ
ಮಾಯಜಲವ ಸೇರಿದ ಮಾತುಗಳು...

ತನ್ನಷ್ಟಕ್ಕೆ ಹೊರಬಂದು...
ಇಂದು...
... ನೆನಪಾದ ಆ ಮಾತು!

ಶ್ರೀ