Showing posts with label ಮೂಕ ಜೀವ. Show all posts
Showing posts with label ಮೂಕ ಜೀವ. Show all posts

Friday, June 10, 2011

ಮೂಕ ಜೀವ

ಮನಕೆ ಇಷ್ಟವಾದ 
ಯೋಚನೆಗಳೇ ಬಾರದ 
ಆಲೋಚನೆಗಳ ಮಧ್ಯೆ 
ಬಯಸಿದ ವಿಷಯಗಳಲ್ಲಿ 
ಸ್ವತಂತ್ರವಾಗಿ 
ಕನಸು ಕಾಣುವ ಬಯಕೆ!

ಮನಕೆ ಬೇಡದ ಕೆಲಸವ 
ಹಿಂಸೆ ಸಹಿಸಲಾರದೆ
ನಗುವನು ನುಂಗಿ 
ಕಪಟ ಮುಖದಿ ಕಲಿತು 
ಬೇಡವೆನುತ್ತಲೇ 
ಕಣ್ಮರೆಯಾಗುವ ಕಾತುರ!

ಅಡೆ-ತಡಗಳಿಗೆ ಸಿಲುಕಿ 
ಮುಖದಿ ಅರ್ಥವ ಹಿಂಗಿ 
ವಿಧಿ ಇಲ್ಲದೇ ಬದಲಾಗಿ 
ಮನದ ಬಯಕೆಯ ಮೀರಿ 
ಕಪಟ ಮುಖದಿ 
ಮೂಕವಾಯಿತು ಜೀವ!

ಶ್ರೀ