ನಾನು ತಿರುಗಿ ನೋಡದ ಸಮಯದ
ಮಾತನ್ನು ಮತ್ತೆ ನೆನಪು ಮಾಡಲು...
ಅವಳ ಹಾಡಿಗೆ, ಅವಳ ನುಡಿಗೆ
ಅವಳ ರಾಗಕೆ ನಾ ಸೋತುಹೋದ
ಸೋತು ಮೈಮರೆತ ಆ ದಿನಗಳು...
ಜೊತೆ ಜೊತೆಯಲಿ ಓಡಾಡಿದ
ಹಸಿರಿನ ದಾರಿ, ಕೈ ಕೈ ಹಿಡಿದು
ಸ್ವರ್ಗದಲ್ಲಿ ನಡೆದ ಆ ದೃಶ್ಯಗಳು...
ಬಯಕೆ ಹಸಿವಾಗಿ, ಹಸಿವು ಅತಿಯಾಗಿ,
ವಿಪರೀತತೆ ಮಿಲನವಾಗಿ, ಕ್ಷಣಗಳು
ಗಂಟೆಗಲಾದ ರಸಿಕ ಪ್ರಸಂಗಗಳು...
ಪ್ರೀತಿಯ ಮಾತುಗಳು, ಸುಂದರ ಸದೃಷ್ಯಗಳು
ಬಿಡುವಿಲ್ಲದ ಮೋಹಕೆ, ಬಲಿಯಾದ ಜೀವಗಳ
ಹುಡುಗಾಟದ ಹುಡುಕಾಟದ ಸಮಯಗಳು...
ಸದಾ ಜೊತೆ ಇರಬೇಕೆಂದು,
ಎರಡು ಹೃದಯಗಳು ಒಂದಾಗಬೇಕೆಂದು,
ಪರಿತಪಿಸಿದ ಆ ಮನಮೋಹಕ ದಿನಗಳು...
ಮಳೆಯಲ್ಲಿ, ಜೊತೆಯಲ್ಲಿ, ನಡೆಯುತಾ,
ಮಳೆಯ ಹಾಡಿಗೆ ಹೆಜ್ಜೆ ಗೆಜ್ಜೆಯಗುತಾ,
ನೆನೆದು ನೆನೆದು, ನೆನೆಯುತ್ತಾ ಕಳೆದು...
ಮುತ್ತುಗಳು, ಮಾತುಗಳು,
ಕನಸುಗಳು, ಆಸೆಗಳು,
ನಮ್ಮಿಬ್ಬರ ಸಂಗಾತಿಗಳು...
ನಮ್ಮ ಮಿಲನಕೆ, ಚಿಲಿಪಿಲಿ
ಹಾಡಿನ ವಾದ್ಯಗಳು, ಹಸಿರು
ತೋರಣದ ಸುಂದರ ವಿಚಾರಗಳು...
ಮಾತಿಗಾಗಿ ಮಾತು, ಹಸಿವಿಗಾಗಿ
ಮಾತು, ನೋವಿಗಾಗಿ ಮಾತು, ನಲಿವಿಗಾಗಿಮಾತು,
ಮಾತು-ಮಾತಿಗೆ ಕೊನೆಯಾದ ಮಾತು...
ಕ್ಷಣಗಳು ನಿಂತುಹೋಗಿ, ಕತ್ತಲಲ್ಲಿ ಕಪ್ಪಾಗಿ,
ಕ್ಷಣಗಳು ಹಾರಿ, ಕಾಣದ ದೂರದ
ಮಾಯಜಲವ ಸೇರಿದ ಮಾತುಗಳು...
ತನ್ನಷ್ಟಕ್ಕೆ ಹೊರಬಂದು...
ಇಂದು...
... ನೆನಪಾದ ಆ ಮಾತು!
ಶ್ರೀ
5 comments:
mounava kanada maathu agali yendu haresuve...
thumba channagi idhe nimma maathu :)
The emotional content of the poem is wonderful.
To my surprise I actually understood and appreciated the rhythemic Kannada words.
Maybe, there is still some hope for me and my Kannada.
Nice to see your feelings taking a shape in this form. Good to see your writing in Kannada.
It makes the reader to take a compulsive emotional dip.....Wonderful!!!!!Keep Emoting !!!!
Again, I didn't understand every single word. But nice!
Post a Comment