Saturday, March 6, 2010

ನನ್ನೊಳಗೇ...

ಆಹಾ! ಅದು ನಾನೇ!
ಎಂದು ಅದೆಷ್ಟು ಬಾರಿ 
ಅಂದುಕೊಂಡಿದ್ದೆನೋ...
ಆದರೂ, ನನಗೆ ನನ್ನ, 
ನನ್ನ ನನ್ನೊಳಗಿನ 
'ನಾನು', ಅರ್ಥವಾಗದ ಕಪಟ...
ಕಪಟದ ಅರ್ಥವ ಹುಡುಕಲು
ಕಪಟದ ಸೂತ್ರವ ಹಿಡಿಯುತ 
ಕಪಟವಾದೆ... ಅದು ನಾನೇ...
ಸರಿ, ಆದರೆ ಅದರ ಹಿಂದಿರುವ 
ಅರ್ಥವಾದರೂ ಏನು? ಪ್ರಶ್ನೆಯ 
ಕೇಳುತಾ, ಉತ್ತರವ ಹುಡುಕಿದೆ...
ಅದು ಅಷ್ಟು ಸುಲಭವೇ? 
ಎಂದಿತು ನನ್ನೆದೆಯ ಬಡಿತ   
ಕೇಳುತಾ ಆ ಪ್ರಶ್ನೆಯ!
ಹೀಗೆ ಪ್ರಶ್ನೆಗೆ ಪ್ರಶ್ನೆಯಾಗಿರುವ,
ಮುಗಿಯದಿರುವ ಮಾತುಗಳ, 
ಸಾಲು ಸಾಲಿನಲ್ಲಿದೆ, ಆ ಒಂದು ಉತ್ತರ! 

ನನ್ನಲ್ಲಿಯೇ ಇದೆ... ಆ ಉತ್ತರ...
ಆದರೂ, ಪ್ರಶ್ನೆಯ ಗುಡುಗಿಗೆ 
ಗಾಳಿಯಂತೆ ಮೌನವಾಗಿದೆ....
ನನಗೆ ಅಸಾದ್ಯವೆಂದು ತಿಳಿದು, 
ಮರೆಯಲು ನಿರ್ಧರಿಸಿದೆ, ಸೋತು,
ನನಗರ್ಥವಾಗದ ವಿಷಯವ...
ದಿನಗಳುರುಳಿ, ಕಾಲ ಬದಲಾಗಿ,
ಕ್ಷಣಗಳು ಕಣ್ಣಿನಲ್ಲಿ  ಬತ್ತುಹೋಗಿ, 
ನಾನೇ ಬದಲಾದೆ ನನಗರಿಯದೆ... 
ಹೊಸದಾದ  ಬೆಳಕನ್ನು ನೋಡಿ,
ಕತ್ತಲಿನ ಹಿಂದಿನ ಕ್ಷಣಗಳ ಮರೆತೆ
ಮರೆತೇ, ಅರಿಯಲು ಹೊಸತನವ...
ಹೊಸ ಮಿಲನಗಳು, ಹೊಸ ಪರಿಚಯಗಳಾಗಿ 
ಕೆಲವೇ ಕ್ಷಣಗಳನ್ನು ದಾಟಿ ಬಂದಿರುವೆ,
ಅಗೋ... ಮತ್ತೆ... ಕಾಡಿತು ಇನ್ನೊಂದು ಪ್ರಶ್ನೆ....
ಏನದು?... ಓಹೋ... ಮತ್ತದೇ ಕಪಟ
ಬೆನ್ನತ್ತಿದ ಭೂತದಂತೆ , ಅದು ಮತ್ತೆ ನಾನೇ!
ನನ್ನೊಳಗಿರುವ ಪ್ರಶ್ನೆಗಳು, ಎಂದೆಂದೂ ನನ್ನೊಳಗೇ....

ನನ್ನೊಳಗೇ...

ಶ್ರೀ 




3 comments:

sunaath said...

ಶ್ರೀ,
ನಿಮ್ಮ ಕವನರೂಪಿ ಪ್ರಶ್ನೆ ಚೆನ್ನಾಗಿದೆ. ಆದರೆ ಈ ಪ್ರಶ್ನೆಗೆ ಉತ್ತರವನ್ನು ಹುಡುಕಲು ಶಂಕರಾಚಾರ್ಯರ ಗ್ರಂಥಗಳನ್ನೇ ಓದಬೇಕಾದೀತು!

Srik said...

ನಿಜ ಸುನಾಥ್. ನೀವು ಹೇಳೋದು ಸರಿ :)

Raghu said...

Good poem.

Hope you get the answer soon.....