ಸುಂದರ ಸಮಯದ
ಆ ಮಧುರ ದಿನಗಳು...
ತುಂತುರು ಹನಿಯ ಸ್ಪರ್ಶಿಸಿ
ಕೈ ಹಿಡಿದು ನಡೆದ ಕ್ಷಣಗಳ
ಆ ಮರೆಯಲಾಗದ ಪ್ರಸಂಗಗಳು...
ಪ್ರತಿ ಕನಸ್ಸಿಗು ಹೆಸರಿಡುತ್ತಾ
ಪ್ರತಿ ಉಸಿರಿಗೂ ಕಿವಿಕೊಟ್ಟ
ಆ ಮಾಯಾಲೋಕದ ದೃಶ್ಯಗಳು...
ನೀರಿನಮೇಲೆ ಹೆಜ್ಜೆಯಿಡುತ್ತಾ
ತಂಗಾಳಿಯಲ್ಲಿ ತೇಲುತ್ತಾ
ಮೈಮರೆತ ಆ ವಿಸ್ಮಯಗಳು...
ನೂರು ಜನ್ಮ ಬಂದರೂ
ನೀನೆ ನನ್ನ ಹಾಡಾಗಬೇಕೆಂದು
ಕೋರಿದ ಆಸೆಗಳು...
ಒಂದರಮೇಲೊಂದು ಬಯಕೆಯ
ಒಂದೊಂದಾಗಿ ತೀರಿಸಲು
ಕೊಟ್ಟ ಮಾತುಗಳು...
ಬಣ್ಣಬಣ್ಣದ ದೃಶ್ಯವ ನೋಡಿ
ಬಣ್ಣದ ಮುಖವಾಡ ಹಾಕಿ
ನಗಾಡಿದ ಆ ಕೆನ್ನೆಯ ಗುಳಿಗಳು...
ಅಂದಿನ ಆ ಸಿಹಿ ನೆನಪುಗಳಲ್ಲೇ
ಹೊಸತಿರುವು ಕಂಡ ಈ ಮನಸ್ಸಿನ
ಇಂದಿನ ಪುಟಗಳು...
ಶ್ರೀ
3 comments:
Wow Wow! Nice one
super!!!!!!!!!!
ಸವಿ ನೆನಪುಗಳನ್ನು ಮೆಲಕು ಹಾಕುವ ಸಿಹಿಗವನ !
Post a Comment