ಮತ್ತೆ ಅರಳಿತು ಹೂವು
ಸೂರ್ಯನ ನಗುವಿಗೆ ಒಲಿದು
ಮತ್ತೆ ಹಾರಿತು ಹಕ್ಕಿ
ಹೊಸ ಪ್ರಪಂಚದ ಕಡೆಗೆ
ಮತ್ತೆ ಹೊಸದೊಂದು ಕನಸು
ಬೇರೆ ನೆಪವ ಹೇಳಿ
ಮತ್ತೆ ಕೇಳಿತು ರಾಗ
ಹಾಡಿನ ಪದವ ಮೀರಿ
ಮತ್ತೆ ಕಾಣಿಸಿತು ನಗುವು
ಮನದ ಮಾತ ಕೇಳಿ
ಮತ್ತೆ ಹಗುರಾಯಿತು ಮನವು
ನಗುವ ಮುಖವ ನೋಡಿ
ಮತ್ತೆ ಹುಟ್ಟಿತು ಆಸೆ
ಆ ತುಂಟತನಕೆ ಸೋತು
ಮತ್ತೆ ಬಯಸಿತು ಹೃದಯ
ಕಣ್ಣಿನ ಸನ್ಹೆಯ ತಿಳಿದು
ಮತ್ತೆ ಮೂಡಿತು ಪ್ರೀತಿ
ನಿನ್ನ ದನಿಗೆ ಕುಣಿದು
ಮತ್ತೆ ಕಾಯುತಿದೆ ಜೀವ
ನಿನ್ನ ಕೂಗಿನ ಕರೆಗೆ...
ಶ್ರೀ